Friday, 17 May 2013

ಅಪ್ಪಣೆ 


ನಿನ್ನ ಕನಸಿನಲ್ಲಲ್ಲದಿದ್ದರೂ ಸರಿ,
ಕಣ್ಣೆವೆಯೊಳಗಾದರೂ ಒಂದಿನಿತು, 
ನೆಲೆ  ನೀಡು, 
ನಾ ಬದುಕಲೇ ಬೇಕಿದೆ... 

ನಿನ್ನ ಮನದಂಗಳದಲ್ಲಿರದಿದ್ದರು ಸರಿ, 
ನೆನಪಿನಂಗಳದಲ್ಲಾದರೂ ಚೂರು, 
ಜಾಗ ಕೊಡು, 
ನಾ ಬದುಕ ಬೇಕಿದೆ... 

ನೀ ನನ್ನ ಪ್ರೀತಿಸದಿದ್ದರೂ ಸರಿ,  
ನೀ ನನ್ನ ಪ್ರೀತಿಸದಿದ್ದರೂ ಸರಿ,  
ನಾ ನಿನ್ನ ಪ್ರೀತಿಸುತ್ತಲೇ ಇರುವೆ, 
ಭಾಷೆ ಕೊಡು...  

 ನೀನಿರದ ಬದುಕ ಕಡಲ,
 ಈಜಲೇ ಬೇಕಿದೆ, 
ಅದಕ್ಕಾದರೂ ಅಪ್ಪಣೆ ನೀಡು, 
ನಾ ಬದುಕಲೇ ಬೇಕಿದೆ...  
                              ಆರ್ ಎಸ್ ಎ